Kannada Articles

1

_________________________________________________________________________________________________________

ಪ್ರಾಚೀನ ಶೈಲಿಯಲ್ಲಿ ಜೀವಂತವಾಗಿರುವುದು

ಡಿ.ಕೆ. ಹೇಮ ಹರಿ & ಡಿ.ಕೆ. ಹರಿ, 

The article highlights the need to look into our own cultural practices which have become relevant today in the wake of Covid -19 challenges. Be it greeting with folded hands, leaving slippers outside the house or customs like practising isolation for 11 to15 days in case of birth or death. Living a balanced life, following Ayurvedic principles and respecting nature is the way forward for human civilization. The crisis has shown our vulnerability, as if to say “Humans are the virus that Nature chooses to eliminate.”

Original Article :  Staying Alive – A Historical Perspective

ನಿಮ್ಮ ಅಜ್ಜಿ ಪ್ರತಿ ಊಟದ ಮೊದಲೂ ನೀವು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ತೊಳಯಲೇ ಬೇಕೆಂದು ಒತ್ತಾಯಿಸುತ್ತಿದ್ದದ್ದು ನಿಮಗೆ ಇನ್ನೂ ನೆನಪಿರಬಹುದು. ಯಾವುದೇ ಋತುವಾದರೂ ಸರಿ, ಬೆಳಿಗ್ಗೆ ಎದ್ದೊಡನೆಯೇ ಸ್ನಾನ ಮಾಡಬೇಕು, ಬಾಗಿಲ ಹೊರಗೆ ಚಪ್ಪಲಿಯನ್ನು ಬಿಡಬೇಕು. ಇತ್ತೀಚಿನ ದಿನಗಳವರೆಗೂ ಇವೆಲ್ಲವೂ ಹಳೆಯ ಕಾಲದ ಪದ್ಧತಿಗಳು.

ಎಂದುಕೊಳ್ಳಲಾಗಿತ್ತು ಆದರೆ ಕೋವಿಡ್-19 ಮಹಾಮಾರಿ ಇಡೀ ಜಗತ್ತನ್ನೇ ಬಡಿದಿರುವುದರಿಂದ ದೀಢೀರೆಂದು ಈ ಎಲ್ಲಾ ಅಭ್ಯಾಸಗಳಿಗೂ ಹೊಸ ಅರ್ಥ ಬಂದಿದೆ. ಭಾರತೀಯ ಶೈಲಿಯಲ್ಲಿ ಅಭಿನಂದಿಸುವ ನಮಸ್ತೆಯನ್ನು ಜಗತ್ತಿನ ಎಲ್ಲಾ ನಾಯಕರೂ ಅನುಸರಿಸಲಾರಂಭಿಸಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ನಾವೆಲ್ಲರೂ ಇಪ್ಪತ್ತು ಸೆಕೆಂಡುಗಳವರೆಗೆ ಸಾಬೂನಿನಿಂದ ಮತ್ತು ನೀರಿನಿಂದ ಕೈತೊಳಯುತ್ತಿದ್ದೇವೆ,ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದೇವೆ. ಈ ಸನ್ನಿವೇಶದಲ್ಲಿ ಭಾರತೀಯ ಅಭ್ಯಾಸಗಳ ಬಗ್ಗೆ ನೆನಪು ಮರುಕಳಿಸುತ್ತಿದೆ ಮತ್ತು ಆಳವಾದ ಗೌರವವೂ ಉಕ್ಕುತ್ತಿದೆ.

ಜಗತ್ತಿನಲ್ಲೇ ಅತೀ ಉತ್ತಮವಾದ ಆರೋಗ್ಯ ವ್ಯವಸ್ಥೆಯನ್ನು ದೇಶಗಳೆಲ್ಲಾ ಈಗ ತೀವ್ರ ಒತ್ತಡದಲ್ಲಿವೆ ಮತ್ತು ಇದಕ್ಕೆ ಪರಿಹಾರ ಕಂಡುಕೊಳ್ಳಲು ಪರದಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಚಿಕಿತ್ಸೆಗಿಂತಲೂ ತಡೆಟ್ಟುವುದೇ ಉತ್ತಮವಾದ ಉಪಾಯವಾಗಿ ಕಾಣುತ್ತಿದೆ. ನಮ್ಮ ದೇಶೀಯ ವೈದ್ಯಕೀಯ ಪದ್ಧತಿಯ ಬಗ್ಗೆ ಗಮನ ಹರಿಸಿದಾಗ , ಅದರಲ್ಲಿ ಸಮತೋಲನವುಳ್ಳ ಜೀವನಶೈಲಿ, ಮಧ್ಯಮ ರೀತಿಯಲ್ಲಿ ತಿನ್ನುವುದು ಮತ್ತು ಋತುಗಳಿಗೆ, ಸ್ಥಳಗಳಿಗೆ ಅನುಗುಣವಾಗಿ ತಿನ್ನುವುದಕ್ಕೆ ಪ್ರಾಧಾನಯ್ಯತೆಯನ್ನು ನೀಡಿರುವುದನ್ನು ತಿಳಿಯಬಹುದು. ಆಯುರ್ವೇದವು,

ಹಿತ ಆಹಾರ, ಮಿತ ಆಯಾಸ, ಮಿತ ಆಯಾಸ, ಹಿತ ಆಹಾರ” ಎನ್ನುತ್ತದೆ. “

ಹಿತವಾದ ಆಹಾರ, ಯೋಗ್ಯವಾದ ವ್ಯಾಯಾಮ, ಮಾಡಬಹುದಾದ ವ್ಯಾಯಾಮ ಮತ್ತು ಅದಕ್ಕೆ ತಕ್ಕಂತೆ ಆಹಾರ” ಎನ್ನುತ್ತದೆ.

ನಾವು ತಿನ್ನುವ ಆಹಾರವು ವಾತ, ಪಿತ್ತ, ಕಫಗಳೆಂಬ ಮೂರು ದೋಷಗಳನ್ನು ಮತ್ತು ಸತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ಮೂರು ಗುಣಗಳನ್ನೂ ಸಮತೋಲನದಲ್ಲಿಡಬೇಕು, ಏಕೆಂದರೆಇವುಗಳ ಅಸಮತೋಲನದಿಂದ ಖಾಯಿಲೆ ಮತ್ತು ಅಹಿತ ಉಂಟಾಗುತ್ತದೆ. ಅನೇಕ ಸಹಸ್ರಮಾನಗಳಿಂದ ಆಯುರ್ವೇದದ ತತ್ವಗಳು ನಮ್ಮ ದೇಶದ ಪದ್ಧತಿಯಾಗಿಬಿಟ್ಟಿವೆ.

ವೈಯಕ್ತಿಕ ಶೌಚ ಮತ್ತು ಸಾಮಾಜಿಕ ಅಂತರವು ನಮ್ಮ ಸಂಸ್ಕೃತಿಯ ಭಾಗವಾಗಿ ನಮಗೆ ಹರಿದು ಬಂದಿದೆ.”ಆಚಾರ” ಎಂದರೆ ಉತ್ತಮವಾದ ಅಭ್ಯಾಸಗಳು ನಮ್ಮ ಪದ್ಧತಿಗಳಾದ —

 ಮನೆಯ ಹೊರಗೆ  ಚಪ್ಪಲಿಯನ್ನು ಬಿಡುವುದು, ಒಂದೇ ಪಾತ್ರೆಯಿಂದ ಎಲ್ಲರೂ ತಿಂದು, ನೀರು ಕುಡಿಯದಿರುವುದು, ಪಯಣ ಮಾಡುವಾಗ ನಮ್ಮ ಊಟವನ್ನೇ ಕೊಂಡೊಯ್ಯುವುದು, ಭಾರತದ ಎಲ್ಲೆಡೆಯೂ ಅಭ್ಯಾಸ ಮಾಡುವಂತಹ ಆಚಾರಗಳು.ಇದರೊಂದಿಗೆ ಪ್ರತಿಯೊಂದು ಪ್ರಾಂತವೂ ತನ್ನದೇ ಆದ ಸ್ಥಳೀಯ ಪದ್ಧತಿಗಳನ್ನು, ಆಹಾರವನ್ನು, ಜೀವನಶೈಲಿಯನ್ನು ಹೊಂದಿದ್ದವು ಮತ್ತು ಅದನ್ನು ದೇಶಾಚಾರ ಎಂದು ಕರೆಯಲಾಗುತ್ತಿತ್ತು. ಈ ದೇಶಾಚಾರವು ಆಯಾ ಪ್ರದೇಶದ ಸ್ವಭಾವ, ವಾತಾವರಣ ಮತ್ತು ಭೂಗೋಳಕ್ಕೆ ಅನುಗುಣವಾಗಿ ಇರುತ್ತಿತ್ತು.

ಇವೆಲ್ಲವೂ ಬೇರೆಯಾಗಿದ್ದರೂ, ಎಲ್ಲರೂ ಒಂದಾಗಿ ಸೇರಿದಾಗ, ಅವೆಲ್ಲವೂ ನಮ್ಮ ದೇಶದ “ಕಲಾಚಾರ”ವಾಗುತ್ತದೆ.1804 ರವರೆಗೂ ನಮ್ಮ ದೇಶದಲ್ಲಿ ಲಸಿಕೆ ಹಾಕಿಸುವ ಪದ್ಧತಿ ಇತ್ತೆಂದು ನಿಮಗೆ ಗೊತ್ತೆ?  ಬ್ರಿಟಿಷರು ಬಂದು ಈ ಅಭ್ಯಾಸವನ್ನು ಕೊನೆಗಾಣಿಸಿದರು. ಡಾ॥ ಜಾನ್ ಝೆಡ್ ಹೊಲ್ವೆಲ್ ಓರ್ವ ಶಸ್ತ್ರಚಿಕಿತ್ಸಕರಾಗಿದ್ದರು ಮತ್ತು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಇವರು ಭಾರತದ ಲಸಿಕೆಯ ಪದ್ಧತಿಯನ್ನು ಗಮನಿಸಿ ದಾಖಲಿಸಿದ್ದಾರೆ. ಅವರ ದಾಖಲೆಗಳಲ್ಲಿ ಒಂದು ನಿರ್ದಿಷ್ಟವಾದ ಜನರಿದ್ದರು ಮತ್ತು ದೂರದ ಪ್ರಾಂತಗಳಿಂದ ಜನರು  ವರ್ಷಕ್ಕೊಮ್ಮೆ ಬಂದು, ತಮ್ಮನ್ನು ಎರಡು ಅಥವಾ ಮೂರು ಜನರ ಸಣ್ಣ ಗುಂಪುಗಳಾಗಿ ವಿಭಜಿಸಿಕೊಂಡು ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದರು ಎಂದು ಬರೆಯಲಾಗಿದೆ. ಅವರ ಪಯಣವನ್ನು ಯಾವ ರೀತಿಯಾಗಿ ಆಯೋಜಿಸಿಕೊಳ್ಳುತ್ತಿದ್ದರು ಎಂದರೆ,  ಸರಿಯಾದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಬರುತ್ತಿದ್ದರು. ಆ ಸಮಯದಲ್ಲಿ ಬಹಳವಾಗಿ ಪೀಡಿಸುತ್ತಿದ್ದ ರೋಗವೆಂದರೆ ಸಣ್ಣ ಸಿಡುಬು.

ಈ ವೈದ್ಯರು ಗೋವಾಸುರಿಯೆಂಬ ಔಷಧವನ್ನು ಎಲ್ಲರಿಗೂ ಕೊಡುತ್ತಿದ್ದರು. ಈ ವ್ಯವಸ್ಥೆ ಬಹಳ ಸುಸೂತ್ರವಾಗಿ ಸಾಗುತ್ತಿದ್ದು, ಬ್ರಿಟಿಷರು ಬಂದು ಇದನ್ನು ನಿಲ್ಲಿಸುವವರೆಗೂ ಸಣ್ಣ ಸಿಡುಬು ಬಂದಿರಲೇ ಇಲ್ಲ. ಜೆನ್ನರ್ ಸಣ್ಣ ಸಿಡುಬಿನ ಲಸಿಕೆ ಕಂಡುಹಿಡಿದಿದ್ದರಿಂದ ನಿಲ್ಲಿಸಿಬಿಟ್ಟರು.

ಭಾರತೀಯ ಪದ್ಧತಿಯ ಅಧ್ಯಯನ ನಡೆಸಿ, ಜೆನ್ನರ್ ಲಸಿಕೆಯನ್ನು ಕಂಡುಹಿಡಿದ. ಹಿಂದಿನ ಜನರು ಅಗೋಚರವಾದ ಬ್ಯಾಕ್ಟೀರಿಯ ಮತ್ತು ವೈರಸ್ ಗಳ ಇರುವಿಕೆಯ ಬಗ್ಗೆ ತಿಳಿದಿದ್ದರು ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಅದರ ಸ್ವಭಾವವನ್ನು ತಿಳಿದಿದ್ದ ಅವರು, ಅದರ ಪ್ರಭಾವವನ್ನು ತಡೆಗಟ್ಟುವ ಬಗ್ಗೆಯೂ ತಿಳಿದಿದ್ದರು. ಆಸಕ್ತಕರವಾಗಿ, ಅಥರ್ವ ವೇದದಲ್ಲಿ ಕ್ರಿಮಿಗಳನ್ನು ನೋಡಲಾಗುವುದಿಲ್ಲವೆಂದೂ ಮತ್ತು ಅದನ್ನು ಕ್ರಿಮಿ ಎಂದೂ ಕರೆಯಲಾಗಿದೆ. ವೈದ್ಯಕೀಯ ಗ್ರಂಥವಾದ ಚರಕ ಸಂಹಿತದಲ್ಲಿ ಕ್ರಿಮಿಗಳು ಅಗೋಚರವಾದವೆಂದೂ ಮತ್ತು ಅವುಗಳ ಬಣ್ಣ ಮತ್ತು ಆಕಾರವನ್ನೂ ವಿವರಿಸಿದೆ. ಅವುಗಳನ್ನು ನೋಡಲು ಅವರ ಬಳಿ ದೂರದರ್ಶಕದ ಯಂತ್ರವಿತ್ತೆ? ಅಷ್ಟು ಸವಿಸ್ತಾರವಾಗಿ ವಿವರಿಸಿದೆ. ಗೌತಮನ ನ್ಯಾಯ ಸಂಹಿತದಲ್ಲಿ ಮಸೂರದ ಬಗ್ಗೆ ವಿವರಣೆಯಿದೆ.

ಅನೇಕ ಭಾರತೀಯ ಪದ್ಧತಿಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ದಿಗ್ಬಂಧನವನ್ನು ಬಳಸಿದ್ದಾರೆ. ಇದರಿಂದ ಸಮಸ್ಯೆಯನ್ನು ಒಂದು ನಿರ್ದಿಷ್ಟವಾದ ಸ್ಥಳಕ್ಕೇ ಸೀಮಿತವಾಗಿಸಿದರು. ಭಗವಂತನನ್ನೂ ಅವರು ಬಿಡಲಿಲ್ಲ. ಪೂರಿಯ ಜಗನ್ನಾಥನನ್ನು ಜ್ಯೇಷ್ಠ ಪೂರ್ಣಿಮದಂದು 14 ದಿನಗಳ ಕಾಲದವರೆಗೆ ದಿಗ್ಬಂಧನದಲ್ಲಿ ಇರಿಸಿರುತ್ತಾರೆ. ಭಾರತದಲ್ಲಿ ಭಗವಂತನನ್ನೂ ಮನುಷ್ಯರಂತೆಯೇ ಪರಿಗಣಿಸುತ್ತಾರೆ ಮತ್ತು ಭಗವಂತನಿಗೂ ಸ್ನಾನ ಮಾಡಿಸಿ ಉಣಿಸುತ್ತಾರೆ ಮತ್ತು ಭಗವಂತನೂ ವಿಶ್ರಮಿಸಿ, ಪುನರುಜ್ಜೀವಿತನಾಗುತ್ತಾನೆ.

ಪಾರಂಪರಿಕವಾಗಿ ನವಜಾತ ಶಿಶುವನ್ನು ಮತ್ತು ಬಾಣಂತಿಯನ್ನು 10ರಿಂದ 15 ದಿನಗಳವರೆಗೆ ಹೊರಗಿನ ಪ್ರಭಾವಗಳಿಂದ ದೂರವಿರಿಸುತ್ತಾರೆ. ಇದರ ಕಾರಣ ನವಜಾತ ಶಿಶು ಮತ್ತು ಬಾಣಂತಿಯ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ ಮತ್ತು ಅವರಿಬ್ಬರೂ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದೇ ರೀತಿಯಾಗಿ ಕುಟುಂಬದಲ್ಲಿ ಮರಣವಾದರೂ ಪ್ರತ್ಯೇಕವಾಗಿ ಇರುತ್ತಾರೆ. ಸ್ಮಶಾಣಕ್ಕೆ ಯಾರಾದರೂ ಹೋಗಿ ಬಂದರೂ ಕಡ್ಡಾಯವಾಗಿ ಸ್ನಾನ ಮಾಡಬೇಕು. ಇದು ಪದ್ಧತಿಯಾಗಿದ್ದರೂ ಅನೇಕ ಅಭ್ಯಾಸಗಳಲ್ಲಿ ಪ್ರಾಯೋಗಿಕವಾದ ಉಪಯುಕ್ತತೆಯಿದೆ.

ವೈರಸ್ನ ದಾಳಿಯಿಂದ ತತ್ತರಿಸಿ  ಹೋಗಿರುವ ಈ ಸಮಯದಲ್ಲಿ ಪಾರಂಪಾರಿಕ ಗುಣಮುಖಗೊಳಿಸುವ  ಪದ್ಧತಿಗಳನ್ನು ಅನುಸರಿಸುವ ಸಂಸ್ಥೆಗಳ ಸಲಹೆಯನ್ನು ಪಡೆಯಲಾಗುತ್ತಿದೆ.

ಆಧುನಿಕ ವೈದ್ಯಕೀಯ ಪದ್ಧತಿಯು ಇದುವರೆಗೂ ಯಾವ ಪರಿಹಾರವನ್ನೂ ಕಂಡುಹಿಡಿದಿಲ್ಲ.

ಆದರೆ ನಮ್ಮ ಭವ್ಯ ಪದ್ಧತಿಯಿಂದ ಮಾರ್ಗಸೂಚಿಗಳನ್ನು ತೆಗೆದುಕೊಂಡು, ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಪುಷ್ಟೀಕರಿಸುವ ಸರಳ ಪದ್ಧತಿಗಳನ್ನು ಅಳವಡಿಸಿಕೊಳ್ಳಬಹುದು.

ಅರಿಶಿಣ, ಕರಿಮೆಣಸು ಮತ್ತು ಇತರ , ಸುಲಭವಾಗಿ ಭಾರತೀಯ ಮನೆಗಳಲ್ಲಿ ಲಭ್ಯವಾಗಿರುವ ಇತರ ಮೂಲಿಕೆಗಳು ಅನೇಕ ಸೋಂಕುಗಳನ್ನು ತಡೆಗಟ್ಟುವ ರಹಸ್ಯಗಳನ್ನು ಹೊಂದಿವೆ.

“ಔಷಧಿಯೇ ಆಹಾರ” ಎಂಬುದೇ ನಮ್ಮ ತತ್ವ. ಆಯುರ್ವೇದವು 80% ತಡೆಗಟ್ಟುವ ಮತ್ತು 20% ಚಿಕಿತ್ಸೆ ನೀಡುವ ಪದ್ಧತಿಯಾಗಿದೆ. ವಿಚಿತ್ರವಾದ ಆಹಾರ ಪದ್ಧತಿ, ನಮ್ಮದಲ್ಲದ ಆಹಾರ, ಡಬ್ಬಿಯಲ್ಲಿ ಕೂಡಿಡಲಾದ ಆಹಾರ, ದಿಢೀರೆಂದು ತಿನ್ನುವ ಆಹಾರ, ಹೊರಗೆ ತಿನ್ನುವ ಆಹಾರ ಒಂದು ರೂಢಿಯಾಗಿಬಿಟ್ಟಿದೆ ಮತ್ತು ಜೀವನಶೈಲಿಯ ರೋಗಗಳಿಗೆ ಕಾರಣವಾಗಿದೆ. ಈಗ ಸ್ವಲ್ಪ ನಿಂತು ಆಲೋಚಿಸಿ ಪ್ರಕೃತಿಯೊಡನೆ ಸಂಯೋಜಿಸಿಕೊಳ್ಳುವ ಕಾಲ ಬಹುಶಃ ಬಂದಾಗಿದೆ. ಋತುಗಳಿಗೆ ಅನುಗುಣವಾದ ಆಹಾರವನ್ನು ಮತ್ತು ಸ್ಥಳೀಯವಾಗಿ ಬೆಳೆಯಲಾದ ತರಕಾರಿಗಳನ್ನು ತಿನ್ನುವುದರಿಂದ ಆರಂಭಿಸಬಹುದು. ಅವುಗಳು ಬಹಳ ಸ್ವಾದಿಷ್ಟವಾಗಿರುತ್ತವೆ, ಸ್ಥಳೀಯ ಆರ್ಥಿಕತೆಗೆ ಬೆನ್ನೆಲುಬಾಗಿರುತ್ತದೆ. ಇದನ್ನು ಬೆಳೆದ ರೈತನಿಗೆ ನೇರ ಲಾಭವಾಗುತ್ತದೆ.

ಮಾನವರಾಗಿ ಈ ಭೂಮಿಯನ್ನು ಆಸ್ತಿ ಯಾಗಿ ಪಡೆದುಕೊಂಡಿದ್ದೇವೆ. ಇತರ ಜೀವಿಗಳಿಗೂ ಇಎದರ ಸಂಪನ್ಮೂಲಗಳ ಸಮಾನ ಹಕ್ಕಿದೆ. ನಮ್ಮ ಪ್ರಜ್ಞಾಪೂರ್ವಕವಾದ ಮತ್ತು ನೈತಿಕ ಆಯ್ಕೆಗಳು ಪರಿಸರದ ಮೇಲೆ ದೀರ್ಘ ಕಾಲದ ಪ್ರಭಾವವನ್ನು ಬೀರುತ್ತದೆ. ತಮ್ಮನ್ನೇ ಪೋಷಿಸುವ ಪ್ರಕೃತಿಯನ್ನು ವಿಪರೀತವಾಗಿ ಬಳಸಿ ಮಾನವ ನಾಶ ಮಾಡುತ್ತಿದ್ದಾನೆ. ಅರಣ್ಯಗಳ ನಾಶ , ಕುಡಿಯುವ ನೀರಿನ ಅತೀ ವೇಗವಾದ ಬತ್ತಿಹೋಗುವಿಕೆ ನಮಗೆಲ್ಲರಿಗೂ ಎಚ್ಚರಿಕೆಯ ಕರೆಯಾಗಿದೆ. ನಾವೆಲ್ಲರೂ ಮತ್ತೆ ನಮ್ಮ ನಿಜ ಸ್ವಭಾವಕ್ಕೆ ಮರಳಿ ಬರಬೇಕಾಗಿದೆ ಮತ್ತು ಭೂತಾಯಿ ನಮ್ಮನ್ನು ಸಂರಕ್ಷಿಸುವಂತಾಗಬೇಕು.

ಪ್ರಕೃತಿಯು ನಾಶ ಮಾಡಲು ಬಯಸುವ ವೈರಸ್ ನಾವೇ!!

/ ______________________________________________________________________________________________

1

____________________________________________________________________________________________________